ಮಾವಿನಕಾಯಿ ಚಟ್ನಿ ಇದು ನೀರಲ್ಲಿ ಹಾಕಿಟ್ಟ ಕಾಯಿ ಮಾವಿನಕಾಯಿಯನ್ನು ಉಪಯೋಗಿಸಿ ಮಾಡುವ ಒಂದು ಬಗೆಯ ಚಟ್ನಿ. ತುಳುನಾಡಲ್ಲಿ ಮಾವಿನಕಾಯಿ ಆಗುವ ಸಮಯದಲ್ಲಿ ಅದನ್ನು ಉಪ್ಪು ನೀರಲ್ಲಿ ಹಾಕಿ ಮಳೆಗಾಲಕ್ಕೆ ಶೇಖರಿಸಿ ಇಡುತ್ತಿದ್ದರು ಅದನ್ನು ಮಳೆಗಾಲದಲ್ಲಿ ಬೇಕಾದಾಗ ತೆಗೆದು ಚಟ್ನಿ ಮಾಡುತ್ತಾರೆ. == ಉಪ್ಪುನೀರಿನ ಮಾವಿನಕಾಯಿ == ಬೇಸಿಗೆಯಲ್ಲಿ ಮಾವಿನಕಾಯಿ ಜಾಸ್ತಿ ಸಿಗುವ ಸಮಯದಲ್ಲಿ ಮಾವಿನಕಾಯಿನ್ನು ಕಿತ್ತು ತಂದು ಕುದಿಯುವ ಉಪ್ಪು ನೀರಲ್ಲಿ ಹಾಕಿ ಜಾಸ್ತಿ ಬೇಯುವ ಮೊದಲೆ ತೆಗೆದು ಚೆನ್ನಾಗಿ ಆರಲು ಬಿಡಬೇಕು ಉಪ್ಪು ನೀರನ್ನೂ ತಣ್ಣಗಾಗಲು ಬಿಟ್ಟು ಎರಡೂ ಚೆನ್ನಾಗಿ ತಣ್ಣಗಾದ ಮೇಲೆ ಭರಣಿಯಲ್ಲಿ ಆ ಮಾವಿನಕಾಯಿಯನ್ನು ತುಂಬಿಸಿ ಅದರ ಮೇಲೆ ತಣ್ಣಗಾದ ಉಪ್ಪು ನೀರನ್ನು ಹೊಯ್ಯಿದು ಭರಣಿಯ ಮುಚ್ಚಳ ಗಟ್ಟಿ ಮುಚ್ಚಿ ಬಟ್ಟೆಯಿಂದ ಕಟ್ಟಿ ಇಡಬೇಕು ಮಳೆಗಾಲದಲ್ಲಿ (ಆಟಿಡ್) ಉಪಯೋಗ ಮಾಡ ಬಹುದು. == ಬೇಕಾದ ಸಾಮಾನುಲು == ಉಪ್ಪುನೀರಿನ ಮಾವಿನಕಾಯಿ ೧ ಜೀರಿಗೆ ಕೆಂಪುಮೆಣಸು ಅಥವಾ ಹಸಿ ಮೆಣಸು ತೆಂಗಿನ ಕಾಯಿ ತುರಿ ಬೆಳ್ಳುಳ್ಳಿ ರುಚಿಗೆ ಬೇಕಾದ ಉಪ್ಪು. ಅರಶಿನ . == ಮಾಡುವ ವಿಧಾನ == ಮೊದಲು ಒಂದು ಬಾಣಲೆಯಲ್ಲಿ ಮೆಣಸಿನ ಕಾಯಿಯನ್ನು ಹುರಿದು ಜೀರಿಗೆ ಸೇರಿಸಿ ನೀರು ಹಾಕದೆ ರುಬ್ಬಿ ಕೊಳ್ಳಬೇಕು . ಆಮೇಲೆ ಅದಕ್ಕೆ ತೆಂಗಿನ ತುರಿ ಸೇರಿಸಿ ರುಚಿಗೆ ಬೇಕಾದಷ್ಟು ಉಪ್ಪು, ಅರಶಿನ ಸೇರಿಸಿ ರುಬ್ಬಿ ಕೊಳ್ಳಬೇಕು ರುಬ್ಬಿದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಉಪ್ಪುನೀರಿನ ಮಾವಿನಕಾಯಿಯನ್ನು ಸಣ್ಣಗೆ ತುಂಡು ಮಾಡಿ ಚಟ್ನಿಗೆ ಹಾಕಿ ಚೆನ್ನಾಗಿ ಕಲಸಿ ನಾದಬೇಕು. == ಬೇರೆ ಬಾಷೆಯಲ್ಲಿ ಮಾವಿನಕಾಯಿ ಚಟ್ನಿ == ಇಂಗ್ಲೀಷ್ - ಮ್ಯಾಂಗೋ ಚಟ್ನಿ. ತುಳು- :ನೀರ್ ಕುಕ್ಕುದ ಚಟ್ನಿ ಹಿಂದಿ - ಕಚ್ಚೆ ಆಮ್ ಕೀ ಚಟ್ನಿ. == ಉಲ್ಲೇಖ ==